ಕನ್ನಡ ವಿಕಿಪೀಡಿಯಕ್ಕೆ ದಶಮಾನೋತ್ಸವ ಸಂಭ್ರಮ
A report of the Kannada Wikipedia tenth anniversary celebrations in Prajavani on November 18.
Read the online version published in Prajavani here.
ಬೆಂಗಳೂರು: ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ ಸಂಭ್ರಮ. ಬಸವನಗುಡಿ ನ್ಯಾಷನಲ್ ಕಾಲೇಜು ಡಾ.ಎಚ್.ನರಸಿಂಹಯ್ಯ ಸಭಾಂಗಣ ದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.
ವಿಕಿಪೀಡಿಯ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಬಹುಭಾಷೆಗಳಲ್ಲಿ ಲಭ್ಯ ಇದೆ. 2001ರಲ್ಲಿ ವಿಕಿಪೀಡಿಯಾ ಆರಂಭವಾಯಿತು. ಕನ್ನಡ ವಿಕಿಪೀ ಡಿಯಾ ಆರಂಭವಾದುದು 2003 ರಲ್ಲಿ. ಪ್ರಸ್ತುತ ಕನ್ನಡ ಆವೃತ್ತಿಯು 15,369 ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. ಇಂಗ್ಲಿಷ್ ವಿಕಿಪೀಡಿಯಾದಲ್ಲಿ 44 ಲಕ್ಷ ವಿಷಯ ಗಳಿವೆ. ಹಿಂದಿಯಲ್ಲಿ 1 ಲಕ್ಷ, ತೆಲುಗು ವಿನಲ್ಲಿ 53,900, ತಮಿಳುನ ಭಾಷೆ ಯಲ್ಲಿ 56,000, ಮಲಯಾಳಂನಲ್ಲಿ 25,000 ವಿಷಯಗಳಿವೆ.
ಇಂಗ್ಲಿಷ್‌ನಲ್ಲಿ 80,000 ಸಂಪಾ ದಕರು ಇದ್ದರೆ, ಕನ್ನಡದಲ್ಲಿ ಇರುವುದು 403 ಮಂದಿ. ಅದರಲ್ಲಿ ಸಕ್ರಿಯರಾ ಗಿರುವವರು 40 ಮಂದಿ.
ಕನ್ನಡ ವಿಕಿಪೀಡಿಯಾದಲ್ಲಿ 2004 ರ ವರೆಗೂ ಒಂದೇ ಲೇಖನ ಇತ್ತು. 2004ರ ಅಂತ್ಯದಲ್ಲಿ ಲೇಖನಗಳ ಸಂಖ್ಯೆ 176ಕ್ಕೆ, 2005ರಲ್ಲಿ 515ಕ್ಕೆ ತಲುಪಿತು. 2006ರ ಜೂನ್‌ನಲ್ಲಿ 1,000 ಲೇಖನ ಗಡಿ ದಾಟಿತು. ಬಳಿಕ ಪ್ರಕ್ರಿಯೆಗೆ ವೇಗ ಸಿಕ್ಕಿತ್ತು. ಮತ್ತೆ ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ಪ್ರಗತಿ ಕುಂಠಿತವಾಗಿದೆ.
‘ಮುಂಬೈಯಲ್ಲಿ ನೆಲೆಸಿರುವ ಎಚ್.ಆರ್.ಲಕ್ಷ್ಮಿ ವೆಂಕಟೇಶ ಅವರು 10,000 ವಿಷಯಗಳನ್ನು ಹಾಗೂ ಬಿ.ಎಸ್.ಚಂದ್ರಶೇಖರ್ ಅವರು 4,000 ವಿಷಯಗಳನ್ನು ಪರಿಷ್ಕರಣೆ ಮಾಡಿದ್ದಾರೆ. ಇಬ್ಬರೂ 80 ವರ್ಷದ ಆಸುಪಾಸಿನವರು. ಇಂತಹ ಉತ್ಸಾಹ ಇತರರಲ್ಲಿ ಮೂಡಿದರೆ ಕನ್ನಡದಲ್ಲಿ ವಿಷಯಗಳ ಸಂಖ್ಯೆ ಜಾಸ್ತಿ ಆಗಲಿದೆ. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನ ಒದಗಿಸದಿದ್ದರೆ ಕನ್ನಡ ಭಾಷೆ ಉಳಿ ಯಲ್ಲ’ ಎನ್ನುತ್ತಾರೆ ವಿಕಿಪೀಡಿಯಾ ಸಂಪಾದಕರಲ್ಲಿ ಒಬ್ಬರಾದ ಯು.ಬಿ.ಪವನಜ.
‘ಕನ್ನಡದ ಬಗ್ಗೆ ವಿಚಾರಸಂಕಿರಣ, ಕವಿಗೋಷ್ಠಿಗಳನ್ನು ನಡೆಸಿದರೆ ಕನ್ನಡ ಭಾಷೆ ಉಳಿಯುತ್ತದೆ ಎಂಬ ಭ್ರಮೆ ಬಿಡಬೇಕು. ಕನ್ನಡ ಸಾಹಿತಿಗಳು ವಿಕಿ ಪೀಡಿಯಾದಲ್ಲಿ ಮಾಹಿತಿ ಸೇರಿಸಲು ತಂತ್ರಜ್ಞಾನದ ಅರಿವಿಲ್ಲವೆಂದು ಮೌನ ವಾಗುವುದು ಸರಿಯಲ್ಲ’ ಎಂದರು.
ದಶಮಾನೋತ್ಸವ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆ, ಸಂವಾದ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.