ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಸೀಳುನೋಟ
ಭಾರತೀಯ ದಂಡಸಂಹಿತೆಯನ್ನು ೨೦೦೫ರಲ್ಲಿ ತಿದ್ದುಪಡಿ ಮಾಡಲಾಯಿತು. ಇದರ ಉದ್ದೇಶ ಆಪಾದಿತರನ್ನು ಬಂಧಿಸಿದಾಗ ಅವರ ಬಗ್ಗೆ ವಿವಿಧ ವೈದ್ಯಕೀಯ ಮಾಹಿತಿ ಸಂಗ್ರಹಿಸಲು ಕಾನೂನುರೀತ್ಯಾ ಅವಕಾಶ ಕಲ್ಪಿಸುವುದು.
ದಂಡಸಂಹಿತೆಯ ಸೆಕ್ಷನ್ ೫೩ರ ಪ್ರಕಾರ, ಅಪರಾಧವನ್ನು ಸಾಬೀತು ಪಡಿಸಲು ವೈದ್ಯಕೀಯ ಪರೀಕ್ಷೆ ಸಾಕ್ಷ್ಯ ಒದಗಿಸುತ್ತದೆ ಎಂದು “ನಂಬಲು ತಕ್ಕಮಟ್ಟಿನ ಕಾರಣಗಳಿದ್ದರೆ”, ಆಪಾದಿತನನ್ನು ಬಂಧಿಸಿದಾಗ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು. ೨೦೦೫ರ ತಿದ್ದುಪಡಿಯ ಮೂಲಕ, ಈ ಪರೀಕ್ಷೆಯ ವ್ಯಾಪ್ತಿಯನ್ನು ಇವೆಲ್ಲವನ್ನು ಸೇರಿಸಿಕೊಳ್ಳಲಿಕ್ಕಾಗಿ ವಿಸ್ತರಿಸಲಾಯಿತು: ರಕ್ತದ, ರಕ್ತಕಲೆಗಳ, ವೀರ್ಯದ ಪರೀಕ್ಷೆ, ಲೈಂಗಿಕ ಅಪರಾಧಗಳಲ್ಲಿ ಸ್ವಾಬ್ಗಳ ಪರೀಕ್ಷೆ, ಉಗುಳು, ಬೆವರು, ಕೂದಲಿನ ಸ್ಯಾಂಪಲ್ ಮತ್ತು ಉಗುರಿನ ತುಂಡುಗಳ ಪರೀಕ್ಷೆ. ನಿರ್ದಿಷ್ಟ ಪ್ರಕರಣದಲ್ಲಿ ಅವಶ್ಯವೆಂದು ನೋಂದಾಯಿತ ವೈದ್ಯರು ಭಾವಿಸುವ ಡಿಎನ್ಎ ಪ್ರೊಫೈಲಿಂಗ್ ಹಾಗೂ ಅಂತಹ ಇತರ ಪರೀಕ್ಷೆಗಳ ಸಹಿತವಾಇ ಆಧುನಿಕ ಮತ್ತು ವೈಜ್ನಾನಿಕ ವಿಧಾನಗಳನ್ನು ಬಳಸಿ ವೈದ್ಯಕೀಯ ಪರೀಕ್ಷೆ ನಡೆಸಬೇಕು.
ಕ್ರಿಮಿನಲ್ ಪ್ರಕರಣದಲ್ಲಿ ಆಪಾದಿತ ಷಾಮೀಲಾಗಿರುವುದನ್ನು ತಿಳಿಯಲಿಕ್ಕಾಗಿ ಡಿಎನ್ಎ ಪರೀಕ್ಷೆಗೆ ಆದೇಶ ನೀಡುವುದರ ಕಾನೂನುಬದ್ಧತೆಯನ್ನು ತೊಗೊರಾಣಿ ಅಲಿಯಾಸ್ ಕೆ. ದಮಯಂತಿ ವರ್ಸಸ್ ಒರಿಸ್ಸಾ ಸ್ಟೇಟ್ ಮತ್ತು ಇತರರು (೨೦೦೪ ಕ್ರಿಮಿನಲ್ ಎಲ್ಜೆ ೪೦೦೩ – ಒರಿಸ್ಸಾ) ಪ್ರಕರಣದಲ್ಲಿ ಒರಿಸ್ಸಾ ಹೈಕೋರ್ಟ್ ಎತ್ತಿ ಹಿಡಿದಿದೆ. ಡಿಎನ್ಎ ಪರೀಕ್ಷೆಗೆ ಆಪಾದಿತ ಸಹಕರಿಸದಿದ್ದರೆ, ಅವನ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಮೂಡುತ್ತದೆ.
ಈ ವಿಷಯದಲ್ಲಿ ವೈಯುಕ್ತಿಕ ಗೌಪ್ಯತೆಯ ಅಂಶಗಳನ್ನು ಪರಿಗಣಿಸಿದ ಬಳಿಕ, ಡಿಎನ್ಎ ಪರೀಕ್ಷೆ ಆದೇಶಿಸುವ ಮುನ್ನ, ಈ ವಿಚಾರಗಳನ್ನು ಪರಿಗಣಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ: (೧) ಅಪರಾಧ ಎಸಗುವುದರಲ್ಲಿ ಆಪಾದಿತನು ಎಷ್ಟರ ಮಟ್ಟಿಗೆ ಭಾಗವಹಿಸಿರಬಹುದು? (೨) ಅಪರಾಧದ ಗಂಭೀರತೆ ಮತ್ತು ಅಪರಾಧ ಎಸಗಿದ ಸಂದರ್ಭ (೩) ಆಪಾದಿತನ ಪ್ರಾಯ, ದೈಹಿಕ ಮತ್ತು ಮಾನಸಿಕ ಆರೋಗ್ಯ (೪) ಅಪರಾಧದಲ್ಲಿ ಆಪಾದಿತ ಭಾಗವಹಿಸಿದ್ದನ್ನು ಖಚಿತಪಡಿಸುವ ಅಥವಾ ಖುಲಾಸೆ ಮಾಡುವ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಕಡಿಮೆ ಆತಂಕಕಾರಿಯಾದ ಮತ್ತು ಕಾರ್ಯಸಾಧ್ಯವಾದ ಇತರ ವಿಧಾನಗಳು ಇವೆಯೇ? (೫) ಆಪಾದಿತನು ಡಿಎನ್ಎ ಪರೀಕ್ಷೆಗೆ ಒಪ್ಪಿಗೆ ನಿರಾಕರಿಸಲು ಕಾರಣಗಳೇನು?
ಸಂಸತ್ತಿನ ಅನುಮೋದನೆಗಾಗಿ ಕಾದಿರುವ ೨೦೦೭ರ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಉದ್ದೇಶವನ್ನು ಚುಟುಕಾಗಿ ಹೀಗೆ ಹೇಳಬಹುದು: “ದೇಶದ ಕ್ರಿಮಿನಲ್ ನ್ಯಾಯವ್ಯವಸ್ಥೆಯ ಕಿಂಚಿತ್ ಸಂಪರ್ಕಕ್ಕೆ ಬಂದವರೆಲ್ಲರ ಡಿಎನ್ಎ ವಿವರಗಳನ್ನು ದಾಖಲಿಸುವ “ಕೇಂದ್ರ ಡಿಎನ್ಎ ಮಾಹಿತಿ ಬ್ಯಾಂಕನ್ನು” ರಚಿಸುವ ಮಹತ್ವಾಕಾಂಕ್ಷಿ ಪ್ರಯತ್ನ.” ಅಂದರೆ, ಸಂಶಯಕ್ಕೆ ಒಳಗಾದ ವ್ಯಕ್ತಿಗಳು, ಕಾನೂನು ಮುರಿಯುವವರು, ಕಾಣೆಯಾದ್ವರು ಮತ್ತು ಸ್ವ-ಇಚ್ಚೆಯವರು – ಇವರ ಡಿಎನ್ಎ ವಿವರಗಳ ಡಿಎನ್ಎ ಮಾಹಿತಿ